Pages

Thaaye Baara Mogava Thora - Sung by Sarada




One of my favorite Kannada patriotic poems in raaga Valaji/Kalavathi.

Lyrics in Kannada:


ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮ ದಾತೆಯೆ ನಮ್ಮ ಜನ್ಮ ದಾತೆಯೆ

ನಮ್ಮ ತಪ್ಪನೆನಿತೊ ತಾಳ್ವೆ ಅಕ್ಕರೆಯಿಂದೆಮ್ಮನಾಳ್ವೆ
ನೀನೆ ಕಣಾ ನಮ್ಮ ಬಾಳ್ವೆ ನಿನ್ನ ಮರೆಯಲಮ್ಮೆವು
ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮವು

ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ
ಕನ್ನಡ ಕಸ್ತೂರಿಯನ್ನ ಹೊಸತು ಸಿರಿಂ ತೀಡದನ್ನ
ಸುರಭಿ ಎಲ್ಲಿ ನೀನದನ್ನ ನವ ಶಕ್ತಿಯ ನೆಬ್ಬಿಸು
ನವ ಶಕ್ತಿಯ ನೆಬ್ಬಿಸು ನವ ಶಕ್ತಿಯ ನೆಬ್ಬಿಸು
ಹೊಸ ಸುಗಂಧ ದೋಸಗೆಯಿಂದ ಜಗದಿ ಹೆಸರ ಹಬ್ಬಿಸು

ಕುಗ್ಗದಂತೆ ಹಿಗ್ಗಿಪಂತೆ ನಿನ್ನ ಹೆಸರ ಟೆಕ್ಕೆಯಂ
ನೀಗದಂತೆ ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ
ನಮ್ಮೆದೆಯಂ ತಾಯೆ ಬಲಿಸು ಎಲ್ಲರ ಬಾಯಲ್ಲಿ ನೆಲೆಸು
ನಮ್ಮ ಮನಮನೊಂದೆ ಕಲಸು ಇದನೊಂದನೆ ಕೋರುವೆ
ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ
Title: Thaye Baara Mogava Thora
Lyrics: Manjeshwara Govinda Pai
Music: G.K.Venkatesh
Film: Kulavadhu (1963) (Kannada)
Original Singer: S.Janaki
Cover By: Sarada


4 comments:

  1. Very nice rendition congrats. I have played this in my keyboard. You can watch in my youTube link - Keyboard Music BSJC

    ReplyDelete
  2. Thank you sir. Sorry for the late reply. Yes watched a couple of your videos. Very well done.

    ReplyDelete
  3. ಆಹಾ...!! ಎಂಥಾ ಭಾಷಾಭಿಮಾನ....!! 😊🙏

    ReplyDelete
  4. ಜೈ ಕನ್ನಡ ತಾಯಿ

    ReplyDelete